Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎರಡು ಹಾಡಿಗೆ ಕುಣಿದ ಆಂಟನಿ
Posted date: 01 Mon, Feb 2016 – 10:17:27 AM

ಶ್ರೀ ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಲಾಂಛನದಡಿಯಲ್ಲಿ ಡಾ|| ರಾಜ್‌ಕುಮಾರ್ ಅರ್ಪಿಸಿ  ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗುರುರಾಜ್‌ಕುಮಾರ್ ನಿರ್ಮಿಸುತ್ತಿರುವ ರನ್ ಆಂಟನಿ ಚಿತ್ರದ ಚಿತ್ರೀಕರಣವು ಈಗ ನಗರದಲ್ಲಿ ಮುಂದುವರೆದಿದೆ.
ಚಿತ್ರಕ್ಕಾಗಿ ವಿನಯ್ ರಾಜ್‌ಕುಮಾರ್, ಸುಷ್ಮಿತಾ ಜೋಷಿ, ರುಕ್ಸರ್‌ಮೀರ್, ಅಭಿನಯದೊಂದಿಗೆ  ಮುರಳಿ ಹಾಗೂ ಹರ್ಷ ನೃತ್ಯ ನಿರ್ದೇಶನದಲ್ಲಿ ಎರಡು ಗೀತೆಗಳನ್ನು ಮಾನ್ಯತಾ ಟೆಕ್‌ಪಾರ್ಕ್, ಓರಾಯನ್‌ಮಾಲ್, ಇನ್ನೋವೇಟಿವ್ ಸಿಟಿ, ಚರ್ಚ್‌ನಲ್ಲಿ ಹಾಗೂ ನಗರದ ಸುತ್ತಮುತ್ತ ಹಲವಾರು ಸನ್ನಿವೇಶಗಳನ್ನು ಮನೋಹರ್ ಜೋಷಿ ಛಾಯಾಗ್ರಹಣದಲ್ಲಿ ನಿರ್ದೇಶಕ ರಘುಶಾಸ್ತ್ರಿ ಚಿತ್ರಿಸಿ ಕೊಂಡರು.
ಚಿತ್ರದ ಚಿತ್ರೀಕರಣವು ಒಂದೇ ಹಂತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.
ಚಿತ್ರಕ್ಕೆ ಹರಿಪರಾಕ್ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ, ಮುರುಳಿ ನೃತ್ಯ, ಮಾಸ್‌ಮಾದ ಸಾಹಸ, ಮಲ್ಲಿಕಾರ್ಜುನ್ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ, ಎಸ್.ಕೆ. ಸಂತೋಷ್ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ರಘುಶಾಸ್ತ್ರಿ.
ತಾರಾಗಣದಲ್ಲಿ ವಿನಯ್‌ರಾಜ್‌ಕುಮಾರ್, ರುಕ್ಷರ್‌ಮೀರ್, ಸುಶ್ಮಿತಾ ಜೋಷಿ, ಶ್ರೀಧರ್ ಕೆ.ಎಸ್. ಶಿವಾಜಿರಾವ್ ಜಾಧವ್ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎರಡು ಹಾಡಿಗೆ ಕುಣಿದ ಆಂಟನಿ - Chitratara.com
Copyright 2009 chitratara.com Reproduction is forbidden unless authorized. All rights reserved.